ನಗರಸಭೆ ಕಾರವಾರವನ್ನು 30-06-1864 ರಂದು ಸ್ಥಾಪಿಸಲಾಯಿತು ಮತ್ತು 01-01-1986 ರಂದು ನಗರಸಭೆ ಆಗಿ ಪರಿವರ್ತಿತವಾಯಿತು. ನಗರಸಭೆ ಕಾರವಾರ ಪ್ರದೇಶದ ಒಟ್ಟು ವ್ಯಾಪ್ತಿಯು 27.15 ಚದರ. ಕಿ.ಮೀ. ಆಗಿದ್ದು, 2011 ರ ಜನಗಣತಿಯ ಪ್ರಕಾರ ಈ ನಗರಸಭೆಯ ಜನಸಂಖ್ಯೆ 63,755 (77139 O.G. ಸೇರಿದಂತೆ ) ಆಗಿದೆ. ನಗರಸಭೆ ಕಾರವಾರದಲ್ಲಿ 31 ಕೌನ್ಸಿಲ್ ವಾರ್ಡಗಳಿವೆ. ನಗರಸಭೆಯ ಮಿತಿಗಳಲ್ಲಿನ ರಸ್ತೆಗಳ ಒಟ್ಟು ಉದ್ದ ಸುಮಾರು 207 ಕಿ.ಮೀ. ಕಾರವಾರವು ಉತ್ತರ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ . ಇದು ಪಶ್ಚಿಮ ಕರಾವಳಿಯಲ್ಲಿರುವ ಕಾಳಿ ನದಿಯ ದಡದಲ್ಲಿದೆ. ಈ ಪಟ್ಟಣವು ಕರ್ನಾಟಕ-ಗೋವಾ ಗಡಿಯಿಂದ 15 ಕಿಲೋಮೀಟರ್ ಮತ್ತು ಬೆಂಗಳೂರಿನಿಂದ 520 ಕಿ.ಮೀ ದೂರದಲ್ಲಿದೆ. ಈ ಪಟ್ಟಣವು ಒಂದು ಬದಿಯಲ್ಲಿ ಸಮುದ್ರ ಮತ್ತು ಇನ್ನೊಂದು ಬದಿಯಲ್ಲಿ ಪಶ್ಚಿಮ ಘಟ್ಟಗಳ ನಡುವೆ ಹರಡಿಕೊಂಡಿದೆ.  ಕಾರವಾರವನ್ನು ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತದೆ. 

ಮೂಲ :  ನಗರಸಭೆ ಕಾರವಾರ, ಕರ್ನಾಟಕ ಸರ್ಕಾರ.